ಆನ್ಲೈನ್ ಆಂಗ್ಲ ಕರಡು ಪರಿಶೀಲನೆ ಮತ್ತು ಸಂಪಾದನೆ ಸೌಕರ್ಯಗಳು

book with magnifying glass

get English proofreading and editing button

ತಪ್ಪುಗಳಿಲ್ಲದ ಆಂಗ್ಲ ಬರವಣಿಗೆಗಳು ನಿಮಗೆ ಬೇಕೇ?

ProofreadingServices.com ನಿಮಗೆ ಸಹಾಯ ಮಾಡುತ್ತದೆ. ನಾವು ವಿಶ್ವದ ಪ್ರಮುಖ ಆನ್ಲೈನ್ ಆಂಗ್ಲ ಕರಡು ಪರಿಶೀಲನೆ ಮತ್ತು ಸಂಪಾದನೆ ಸೌಕರ್ಯಗಳನ್ನು ಒದಗಿಸುವ ಕಂಪನಿ. ನಾವು 90 ಕ್ಕಿಂತ ಹೆಚ್ಚು ದೇಶಗಳಲ್ಲಿ ಶೈಕ್ಷಣಿಕ, ವ್ಯಾವಹಾರಿಕ ಮತ್ತು ಲೇಖಕರೊಂದಿಗೆ ಕಾರ್ಯನಿರ್ವಹಿಸುತ್ತೇವೆ. ನಿಮಗೆ ಆಂಗ್ಲ ಶೈಕ್ಷಣಿಕ ಕರಡು ಪರಿಶೀಲನೆ, ವ್ಯಾವಹಾರಿಕ ಕರಡು ಪರಿಶೀಲನೆ, ಸಾಹಿತ್ಯದ ಹಸ್ತಪ್ರತಿಯ ಕರಡು ಪರಿಶೀಲನೆ, ಅಥವಾ ಆಂಗ್ಲ ರೆಸ್ಯೂಮ್ ಬರವಣಿಗೆ, ಇತರ ಯಾವುದರ ಅಗತ್ಯವಿದ್ದರೂ, ನಮ್ಮ ನಿಪುಣ ಕರಡು ಪರಿಶೀಲಕರು ನಿಮಗೆ ಅಗತ್ಯವಿರುವ ಆಂಗ್ಲ ತಿದ್ದುಪಡಿಗಳನ್ನು ಒದಗಿಸುತ್ತಾರೆ.

→ [ನೀವು ನಮ್ಮ ಆಂಗ್ಲ ಕರಡು ಪರಿಶೀಲನೆ ದರಗಳನ್ನು ತಿಳಿಯಬೇಕೇ? ಉಚಿತ ಉಲ್ಲೇಖ ಪಡೆಯಿರಿ.]

ನಿಮ್ಮ ಬರವಣಿಗೆಯ ಗುಣಮಟ್ಟವು, ಜನರು ವೃತ್ತಿಪರ ಅಥವಾ ಶೈಕ್ಷಣಿಕ ವಾತಾವರಣದಲ್ಲಿ ನಿಮ್ಮನ್ನು ಹೇಗೆ ಗುರುತಿಸುತ್ತಾರೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ತಪ್ಪುಗಳಿಲ್ಲದ ಆಂಗ್ಲ ಬರವಣಿಗೆಯ ಕಾಗದ ಪತ್ರಳನ್ನು ನೀಡುವುದರಿಂದ ನಿಮ್ಮ ಕಾರ್ಯಕ್ಷೇತ್ರದಲ್ಲಿ ನಿಮ್ಮ ಸ್ಥಾನಮಾನ ಸುಧಾರಿಸುತ್ತದೆ. ನಮ್ಮ ವೃತ್ತಿಪರ ಆಂಗ್ಲ ಕರಡು ಪರಿಶೀಲಕರು ವ್ಯಾಕರಣ, ಉಚ್ಚಾರ, ವಿನ್ಯಾಸ, ಪದಗಳ ಆಯ್ಕೆ, ವಾಕ್ಯ ರಚನೆ ಮತ್ತು ಹೆಚ್ಚಿನದರಲ್ಲಿ ತಪ್ಪುಳನ್ನು ಕಂಡುಹಿಡಿಯುತ್ತಾರೆ. ನಿಮ್ಮ ಕೆಲಸಕ್ಕೆ ಅರ್ಹವಾದ ಗೌರವವು ಸಿಗುವಂತೆ ಮಾಡುವ ಸಲುವಾಗಿ ನಾವು ನಿಮ್ಮ ಆಂಗ್ಲ ಬರವಣಿಗೆಯನ್ನು ಸರಿಪಡಿಸುತ್ತೇವೆ.

ನಮ್ಮ ಆಂಗ್ಲ ಕರಡು ಪರಿಶೀಲನೆ ಮತ್ತು ಸಂಪಾದನೆ ಸೌಕರ್ಯಗಳು ನಿಮಗೆ ಅಗತ್ಯವಿದೆಯೆ?

ಈ ರೀತಿ ಕಲ್ಪಿಸಿಕೊಳ್ಳಿ: ನಿಮ್ಮ ಆಂಗ್ಲ ಲೇಖನವೊಂದರ ಮೇಲೆ ನೀವು ಗಂಟೆಗಳ ಕಾಲ ಕೆಲಸ ಮಾಡುತ್ತೀರಿ ಮತ್ತು ನೀವು ಅದನ್ನು ಪ್ರಮುಖ ಶೈಕ್ಷಣಿಕ ನಿಯತಾಕಲಿಕವೊಂದಕ್ಕೆ ಸಲ್ಲಿಸಬೇಕು. ನಿಮ್ಮ ಅಂಗ್ಲ ಬರವಣಿಗೆಯು ಸರಿಯಾಗಿ ಇರಬೇಕೆಂಬುದು ನಿಮ್ಮ ಅನಿಸಿಕೆ, ಏಕೆಂದರೆ ನಿಮ್ಮ ಶೈಕ್ಷಣಿಕ ಸಹಚರರ ಮುಂದೆ ನಿಮ್ಮನ್ನು ನೀವು ಮುಜುಗರಕ್ಕೊಳಪಡಿಸಿಕೊಳ್ಲಲು ನಿಮಗೆ ಇಷ್ಟವಿಲ್ಲ. ಸಲ್ಲಿಕೆಯ ಗಡುವು ಹತ್ತಿರ ಬರುತ್ತಿದೆ - ಇನ್ನು 48 ಗಂಟೆಗಳು ಮಾತ್ರ ಉಳಿದಿವೆ. ನಿಮಗೆ ಸಹಾಯ ಬೇಕು, ಆದಷ್ಟು ಬೇಗ ಸಹಾಯ ಬೇಕು.

ಇಂತಹ ಸಂದರ್ಭ ಎಷ್ಟು ಒತ್ತಡದಿಂದ ಕೂಡಿರುತ್ತದೆ ಎಂಬುದು ನಮಗೆ ತಿಳಿದಿದೆ. ನಾವು ಆಂತಹ ಪರಿಸ್ಥಿತಿಗಳನ್ನು ಎದುರಿಸಿದ್ದೇವೆ. ಅದಕ್ಕಾಗಿಯೇ ನಾವು ನಮ್ಮ ಸೌಕರ್ಯಗಳನ್ನು ಸಾಕಷ್ಟು ಅನುಕೂಲಕರ ಮತ್ತು ವೇಗವಾಗಿ ಸಾಧ್ಯವಾಗುವಂತೆ ಮಾರ್ಪಡಿಸಿದ್ದೇವೆ. ಕೆಲವು ದಿನಗಳಲ್ಲೇ ನಿಮ್ಮ ಕಾಗದ ಪತ್ರಗಳು ನಿಮಗೆ ಬೇಕೇ? ಯಾವ ತೊಂದರೆಯಿಲ್ಲ. ಕೆಲವು ಗಂಟೆಗಳು? ಅದು ಕೂಡ ನಮ್ಮಿಂದ ಸಾಧ್ಯ.

ನಿಮ್ಮ ಕಾಗದ ಪತ್ರಗಳನ್ನು ನಮಗೆ ಕಳುಹಿಸಿ ಆರಾಮಾಗಿರಿ. ಉಳಿದ ಕೆಲಸವನ್ನು ನಾವು ನೋಡಿಕೊಳ್ಳುತ್ತೇವೆ.

[ಕರಡು ಪರಿಶೀಲನೆ ಮತ್ತು ಸಂಪಾದನೆಯನ್ನು ಇಲ್ಲಿ ಆರ್ಡರ್ ಮಾಡಿ.]

ಸೂಚನೆ: ನಾವು ಅನುವಾದ ಸೌಕರ್ಯಗಳನ್ನು ಸಹ ನೀಡುತ್ತೇವೆ. ನೀವು ಅನುವಾದ ಸೌಕರ್ಯಗಳನ್ನು ಇಲ್ಲಿ ಆರ್ಡರ್ ಮಾಡಬಹುದು.

ನಮ್ಮ ಆಂಗ್ಲ ಕರಡು ಪರಿಶೀಲನೆಯ ತಂಡ ಎಷ್ಟು ಯೋಗ್ಯವಾಗಿದೆ?

ನಮ್ಮ ನುರಿತ ಕರಡು ಪರಿಶಿಲಕರು ಮತ್ತು ಸಂಪಾದಕರು ವೃತ್ತಿಪರ ಬರವರಣಿಗೆ, ಸಂಪಾದನೆ, ಮತ್ತು ಕರಡು ಪರಿಶೀಲನೆಯ ಹಿನ್ನೆಲೆ ಹೊಂದಿರುವ ಸ್ಥಳೀಯ ಆಂಗ್ಲ ಭಾಷಿಕರು. ಇಲ್ಲಿ ಹಲವರು ಉನ್ನತ ಶೈಕ್ಷಣಿಕ ನಿಯತಕಾಲಿಕಗಳಿಗೆ ಹಲವು ವರ್ಷಗಳಿಂದ ಲೇಖನಗಳನ್ನು ಸಲ್ಲಿಸಿರುವ ಅನುಭವವುಳ್ಳ ನಿವೃತ್ತ ಆಂಗ್ಲ ಮತ್ತು ವಿಜ್ಞಾನ ಪ್ರಾಧ್ಯಾಪಕರು. ನಮ್ಮ ತಂಡದ ಪ್ರತಿ ಸದಸ್ಯರು ಕಠಿಣವಾದ ಕರಡು ಪರಿಶೀಲನೆ ಮತ್ತು ಸಂಪಾದಕೀಯ ಪರೀಕ್ಷೆಗಳನ್ನು ತೇರ್ಗಡೆ ಹೊಂದಿದ್ದಾರೆ. ನಾವು ಪ್ರತಿ 300 ಆಂಗ್ಲ ಕರಡು ಪರಿಶೀಲನೆ ಅರ್ಜಿದಾರರಲ್ಲಿ ಒಬ್ಬರನ್ನು ಮಾತ್ರ ನೇಮಿಸಿಕೊಳ್ಳುತ್ತೇವೆ- ನಮ್ಮ ಆಯ್ಕೆ ಮಾಡುವ ವಿಧಾನ ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕಿಂತ ಹೆಚ್ಚು ಕಟ್ಟುನಿಟ್ಟಾದದ್ದು. ನಮ್ಮ ಕರಡು ಪರಿಶೀಲಕರು ಅವರು ಮಾಡುವ ಕೆಲಸದಲ್ಲಿ ನಿಪುಣರು, ಮತ್ತು ನಿಮ್ಮ ಆಂಗ್ಲ ಬರವಣಿಗೆಯನ್ನು ಹೇಗೆ ಸರಿಪಡಿಸಬೇಕು ಎಂಬುದು ಅವರಿಗೆ ತಿಳಿದಿದೆ.

ಉಚಿತ ಆಂಗ್ಲ ಕರಡು ಪರಿಶೀಲನೆ ಮಾದರಿ ಬೇಕೇ?

ಅಮೆರಿಕದಲ್ಲಿರುವ ನಮ್ಮ ಪ್ರಧಾನ ಕಛೇರಿಯಿಂದ ನೀವು ಸಾವಿರಾರು ಕಿಲೋಮೀಟರ್ ದೂರವಿರಬಹುದು ಎಂಬುದು ನಮಗೆ ತಿಳಿದಿದೆ. ಹಾಗಾಗಿ ನಮಗೆ ಆರ್ಡರ್ ನೀಡುವ ಮೊದಲು ನೀವು ನಮ್ಮ ಕೆಲಸದ ಮಾದರಿಯನ್ನು ನೋಡಲು ಬಯಸಬಹುದು. ನಮ್ಮ ಕರಡು ಪರಿಶೀಲಕರು ನಿಮ್ಮ ಬರವಣಿಗೆಯನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ನೋಡಲು ಉಚಿತ ಮಾದರಿಯನ್ನು ಪಡೆಯಿರಿ:

[ಉಚಿತ ಕರಡು ಪರಿಶೀಲನೆ ಮಾದರಿಯನ್ನು ಇಲ್ಲಿ ಪಡೆಯಿರಿ.]

ಸೂಚನೆ: ನಮ್ಮ ವೆಬ್ಸೈಟ್ ನ ಉಳಿದ ಭಾಗವು ಆಂಗ್ಲದಲ್ಲಿದೆ. ಏನೇ ಆದರೂ, ನಾವು ಆಂಗ್ಲ ಕರಡು ಪರಿಶೀಲಕರು ಅಲ್ಲವೇ!

ನಮ್ಮ ಆಂಗ್ಲ ಕರಡು ಪರಿಶೀಲಕರು ಮತ್ತು ಸಂಪಾದಕರೊಂದಿಗೆ ಕೆಲಸ ಮಾಡಲು ಸಿದ್ಧರಿರುವಿರಾ?

[ಈಗಲೇ ಆಂಗ್ಲ ಸಂಪಾದಕೇಯ ಆರ್ಡರನ್ನು ನೀಡಿ.]