ಕನ್ನಡದಿಂದ ಇಂಗ್ಲಿಷ್ಗೆ ಪುಸ್ತಕಾನುವಾದ ಸೇವೆಗಳು
ProofreadingServices.com ಕಾದಂಬರಿ ಮತ್ತು ಕಾದಂಬರಿಯೇತರ ಪುಸ್ತಕಗಳನ್ನು ಕನ್ನಡದಿಂದ ಇಂಗ್ಲಿಷ್ಗೆ ಅನುವಾದ ಮಾಡುವ ಮೂಲಕ ಲೇಖಕರಿಗೆ ಹೊಸ ಓದುಗರನ್ನು ತಲುಪಲು ಮತ್ತು ಹೆಚ್ಚಿನ ಪುಸ್ತಗಳನ್ನು ಮಾರಾಟ ಮಾಡಲು ಸಹಾಯಮಾಡುತ್ತದೆ. ನಮ್ಮ ವೃತ್ತಿಪರ ಭಾ಼ಷಾಂತರ ಸೇವೆಗಳು 100% ಮಾನವಾಧಾರಿತ- ಯಾವತ್ತೂ ಯಾಂತ್ರಿಕವಲ್ಲ ಮತ್ತು ನಿಮ್ಮ ಬರಹದ ನಿಜವಾದ ಧ್ವನಿ ಮತ್ತು ಶೈಲಿಯನ್ನು ಉಳಿಸಿಕೊಂಡು ನಿಖರವಾಗಿ ಅನುವಾದ ಮಾಡಿಕೊಡಲು ನಾವು ನಮ್ಮ ಬಗ್ಗೆ ಹೆಮ್ಮೆಪಡುತ್ತೇವೆ.
ಸಾಹಿತ್ಯನುವಾದದ ಯಾವುದೇ ಸೇವೆಗಾಗಿ ನಮ್ಮನ್ನು ಸಂಪರ್ಕಿಸಿ.
ನಿಮ್ಮ ಪುಸ್ತಕವನ್ನು ಕನ್ನಡದಿಂದ ಇಂಗ್ಲಿಷ್ಗೆ ಅನುವಾದಿಸುವ ಅಗತ್ಯವೇನಿದೆ?
ನೀವು ನಿಮ್ಮ ಪುಸ್ತಕ ಬರೆಯಲು ಅನೇಕ ತಿಂಗಳುಗಳನ್ನು ಅಥವಾ ವರ್ಷಗಳನ್ನೇ ವ್ಯಯಿಸಿರುತ್ತೀರಿ, ಹಾಗಾಗಿ ಅದನ್ನು ಕನ್ನಡದಲ್ಲಿ ಮಾತ್ರ ಪ್ರಕಟಿಸಿ ಅದರ ಪ್ರಭಾವಕ್ಕೆ ಏಕೆ ಮಿತಿಯೊಡ್ಡುತ್ತೀರಿ? ಕನ್ನಡವನ್ನೇ ಓದದ ಕೋಟ್ಯಂತರ ಜನರನ್ನು ತಲುಪಲು ಇರುವ ಅತ್ಯುತ್ತಮ ವಿಧಾನವೆಂದರೆ ನಿಮ್ಮ ಕೆಲಸವನ್ನು ಇಂಗ್ಲಿಷ್ಗೆ ಅನುವಾದಿಸುವುದು. ವೃತ್ತಿಪರ ಇಂಗ್ಲಿಷ್ ಅನುವಾದದಿಂದ ನೀವು ನಿಮ್ಮ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲದೆ ನಿಮ್ಮ ಮಾರಾಟವನ್ನೂ ವೃದ್ಧಿಸಿಕೊಳ್ಳುತ್ತೀರಿ.
ನಾವು ನೀಡುವ ಪುಸ್ತಕಾನುವಾದ ಸೇವೆಗಳಾದರೂ ಯಾವುವು?
ನಾವು ಕನ್ನಡದಿಂದ ಯುಎಸ್ ಅಥವಾ ಯುಕೆ ಇಂಗ್ಲಿಷ್ಗೆ ಭಾಷಾಂತರಿಸುವ ಜೊತೆಗೆ, ನಮ್ಮ ಇಂಗ್ಲಿಷ್ ತಂಡ ಪ್ರತ್ಯೇಕ ಪ್ರೂಫ್ರೀಡಿಂಗ್ ಸೇವೆ ಒದಗಿಸುತ್ತದೆ. ಇತರೆಡೆ ಕೇವಲ ನಿಮ್ಮ ಪುಸ್ತಕವನ್ನು ಕೇವಲ ಅನುವಾದಿಸಿದರೆ, ನಾವು ಬರಹವನ್ನು ಅನುವಾದಿಸುತ್ತೇವೆ ಮತ್ತು ಅದನ್ನು ಇಂಗ್ಲಿಷ್ ಭಾಷಾತಜ್ಞರಿಗೆ ಕಳುಹಿಸಿ ವಿಚಿತ್ರ ಪದವಿನ್ಯಾಸ ಮತ್ತು ಅನಗತ್ಯ ದೋಷಗಳನ್ನು ನಿವಾರಿಸುತ್ತೇವೆ. ಎಷ್ಟಾದರೂ, ProofreadingServices.com ಒಂದು ಪ್ರೂಫ್ರೀಡಿಂಗ್ ಮತ್ತು ಎಡಿಟಿಂಗ್ ಸೇವೆಯಾಗಿ ಆರಂಭವಾಗಿತ್ತು, ಮತ್ತು ನಮ್ಮ ತಂಡ ವಿಶ್ವದ ಕೆಲವು ಅತ್ಯುತ್ತಮ ಇಂಗ್ಲಿಷ್ ಸಂಪಾದಕರನ್ನು ಒಳಗೊಂಡಿದೆ.
ಯಾವೆಲ್ಲಾ ತರಹದ ಹಸ್ತಪ್ರತಿಗಳನ್ನು ನಾವು ಅನುವಾದಿಸುತ್ತೇವೆ?
ನಾವು ಕಾಂಬರಿಗಳು, ಕಾಲ್ಪನಿಕವಲ್ಲದ ಬರಹಗಳು, ಮಕ್ಕಳ ಪುಸ್ತಕಗಳು, ಮತ್ತು ಜಗತ್ತಿನೆಲ್ಲೆಡೆಯ ಬರಹಗಾರರಿಗೆ ಅನುವಾದ ಸೇವೆ ಒದಗಿಸುತ್ತೇವೆ. ನಾವು ಈ ಕೆಳಗಿನವುಗಳಲ್ಲಿ ಪರಿಣತರು…
- ಸಾಹಿತ್ಯಿಕ ಪುಸ್ತಕಗಳು, ಅಂದರೆ ವಿಜ್ಞಾನ ಕಾಲ್ಪನಿಕ ಕಾದಂಬರಿಗಳು, ಪ್ರಣಯದ ಕಾದಂಬರಿಗಳು, ಮತ್ತು ಐತಿಹಾಸಿಕ ಕಾಲ್ಪನಿಕಗಳು.
- ಶೈಕ್ಷಣಿಕ ಪುಸ್ತಕಗಳು, ಅಂದರೆ ಹಸ್ತಪ್ರತಿಗಳು, ತತ್ವಶಾಸ್ತ್ರ, ಇತಿಹಾಸ, ವಿಜ್ಞಾನ, ಮತ್ತು ಇತರ ವಿಷಯಗಳ ಬಗ್ಗೆ.
- ಉದ್ಯಮ ಕುರಿತಾದ ಪುಸ್ತಕಗಳು, ಉತ್ಪಾದನೆ ಕುರಿತ ಇ-ಪುಸ್ತಕಗಳು, ನಾಯಕತ್ವ ಕುರಿತಾದ ಪುಸ್ತಕಗಳು, ಮತ್ತು ಇತರೆ ಹಲವು.
ನಾವು ವಿವಿಧ ಪ್ರಾಕಾರಗಳು ಮತ್ತು ವಿಷಯಗಳಿಗೆ, ಅಂದರೆ ಅದು ಯುವ ವಯಸ್ಕರಿಗೆ ಸಂಬಂಧಿಸಿದ, ನೆನಪುಗಳು, ಅಡುಗೆ ಪುಸ್ತಕಗಳು, ಕಾಲ್ಪನಿಕಗಳಲ್ಲದ ರಾಜಕೀಯ ವಿಜ್ಞಾನ, ತಂತ್ರಜ್ಞಾನ ಮತ್ತು ಕಲೆಗೆ ಸಂಬಂದಪಟ್ಟ ಪುಸ್ತಕಗಳನ್ನು ಹೊಂದಿದ ಸಾವಿರಾರು ಗ್ರಾಹಕರೊಂದಿಗೆ ಕೆಲಸ ಮಾಡಿದ್ದೇವೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ನಮ್ಮ ವರ್ಷಗಟ್ಟಲೆ ಅನುಭವ ಹೆಚ್ಚುಕಡಿಮೆ ಯಾವುದೇ ಭಾಷೆಯಲ್ಲಿ, ಯಾವುದೇ ವಿಷಯದ ಬಗ್ಗೆ ಬರೆದ ಪುಸ್ತಕಗಳನ್ನು ಭಾಷಾಂತರಿಸುವ ಮತ್ತು ಪ್ರೂಫ್ರೀಡ್ ಮಾಡುವ ಭಾಷಾ ತಜ್ಞರ ವಿಶಾಲವಾದ ಜಾಲವನ್ನು ನಿರ್ಮಿಸಿದೆ.
ನೀವು ನಿಮ್ಮ ಪುಸ್ತಕಕ್ಕೆ ನಮ್ಮ ಕನ್ನಡ ಅನುವಾದ ಸೇವೆಗಳನ್ನು ಏಕೆ ಆರಿಸಿಕೊಳ್ಳಬೇಕು?
ProofreadingServices.com ನಲ್ಲಿ ನಾವು ಪುಸ್ತಕಗಳನ್ನು ಸಾಹಿತ್ಯಿಕ ಅನುವಾದಕರಿಗೆ ಕೊಡುತ್ತೇವೆಯೇ ಹೊರತು ಸಾಮಾನ್ಯ ಅನುವಾದಕರಿಗಲ್ಲ. ಒಬ್ಬ ನಿಪುಣ ಸಾಹಿತ್ಯಿಕ ಅನುವಾದಕ ಸಾಹಿತ್ಯದ ಶಬ್ದಾನುವಾದವನ್ನು ಮೀರಿ ನಿಮ್ಮ ಪ್ರಾಕಾರದ ಸಂಪ್ರದಾಯ, ಮತ್ತು ನಿಮ್ಮ ಧ್ವನಿ ಮತ್ತು ಬರವಣಿಗೆಯ ಶೈಲಿಯ ಸೂಕ್ಷ್ಮ ವ್ಯತ್ಯಾಸಗಳನ್ನು ಗಮನಿಸಿ ಕಾಪಾಡಿಕೊಳ್ಳುತ್ತಾನೆ.
ನಾವು ವಿಶ್ವದೆಲ್ಲೆಡೆಯ ಬರಹಗಾರರಿಗೆ ಅತ್ಯುತ್ತಮ ಅನುವಾದಕರು ಮತ್ತು ಇಂಗ್ಲಿಷ್ ಪ್ರೂಫ್ರೀಡರ್ಗಳ ಜೊತೆ ಸಂಪರ್ಕ ಸಾಧಿಸುವುದನ್ನು ಸುಲಭವಾಗಿಸುತ್ತೇವೆ. ನೀವು ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು, ಅಥವಾ ಬೇರೆಲ್ಲಾದರೂ ನೆಲೆಸಿದ್ದರೂ, ನಮ್ಮ ಕನ್ನಡದಿಂದ ಇಂಗ್ಲಿಷ್ ಅನುವಾದ, ಪ್ರತ್ಯೇಕ ಪ್ರೂಫ್ರೀಡಿಂಗ್ ಸೇವೆ ನಿಮ್ಮ ಪುಸ್ತಕವನ್ನು ಕೊಳ್ಳಲು ಹೆಚ್ಚಿನ ಓದುಗರನ್ನು ಒದಗಿಸುವ ಮತ್ತು ನಿಮ್ಮ ಕೆಲಸವನ್ನು ಅವರು ಮೆಚ್ಚಿಕೊಳ್ಳುವಂತೆ ಮಾಡಲು ಇರುವ ಸರಳ ವಿಧಾನ. ನಾವು ಅತ್ಯುಚ್ಛ ಗುಣಮಟ್ಟದ ಬಾಷಾಂತರ ಸೇವೆಗಳು, ಉತ್ತಮ ಗ್ರಾಹಕ ಸೇವೆ, ಕೈಗೆಟುಕುವ ದರದೊಂದಿಗೆ, ನಮ್ಮ ಕೆಲಸದಿಂದ ನೀವು ಸಂತೃಪ್ತರಾಗುವುದನ್ನು ಖಾತ್ರಿಪಡಿಸುತ್ತೇವೆ.