ವೃತ್ತಿಪರ ಆನ್‌ಲೈನ್ ಭಾಷಾಂತರ ಸೇವೆಗಳು
ProofreadingServices.com ಕನ್ನಡದಿಂದ ಇಂಗ್ಲಿಷ್‌ಗೆ, ಇಂಗ್ಲಿಷ್‌ನಿAದ ಕನ್ನಡಕ್ಕೆ, ಇನ್ನೂ ಅನೇಕ ಜೋಡಿ ಭಾಷೆಗಳ ವೃತ್ತಿಪರ ಭಾಷಾಂತರ ಸೇವೆಯನ್ನು ಒದಗಿಸುತ್ತದೆ.ಇದೇ ವೇಳೆ ನಾವು ಶೈಕ್ಷಣಿಕೆ, ವೃತ್ತಿಯ ನಿರೀಕ್ಷೆಯಲ್ಲಿರುವವರು, ಬ್ಯುಸಿನೆಸ್‌ಮನ್‌ಗಳು, ಮತ್ತು ವಿಶ್ವದೆಲ್ಲೆಡೆ ಇರುವ ಬರಹಗಾರರಿಂದ ನಮ್ಮ ಇಂಗ್ಲಿಷ್ ಪ್ರೂಫ್‌ರೀಡಿಂಗ್ ಮತ್ತು ಎಡಿಟಿಂಗ್ ಸೇವೆಗಳಿಗಾಗಿ ಗುರುತಿಸಲ್ಪಟ್ಟಿದ್ದೇವೆ. ನಮ್ಮ ಮಾನವ ಅನುವಾದ ಸೇವೆಗಳು, ಅತ್ಯುತ್ತಮ ಗುಣಮಟ್ಟದ ಕೆಲಸ, ಅದ್ಭುತ ಗ್ರಾಹಕ ಸೇವೆ, ಮತ್ತು ಕೈಗೆಟುಕುವ ದರದ ಬದ್ಧತೆಯನ್ನು ತೋರಿಸುತ್ತವೆ.
ಯಾವುದೇ ಭಾಷಾಂತರ ಸೇವೆಗಾಗಿ ನಮ್ಮನ್ನು ಸಂಪರ್ಕಿಸಿ.
ನಾವು ಒದಗಿಸುವ ಭಾಷಾಂತರ ಸೇವೆಗಳು ಯಾವುವು?
ನೀವು ಇಂಗ್ಲಿಷ್ ಭಾಷಾ ನಿಯತಕಾಲಿಕೆ ಅಥವಾ ಬೇರೆ ಯಾವುದನ್ನೋ ಇಂಗ್ಲಿಷ್ ಬಾಷೆ ಮಾತನಾಡುವ ದೇಶದಲ್ಲಿ ಪ್ರಕಟಿಸಲು ಬಯಸಿದ್ದೀರಾ? ನಾವು ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರ ಮಾಡುತ್ತೇವೆ, ನಮ್ಮ ಇಂಗ್ಲಿಷ್ ತಂಡದಿAದ ಪ್ರತ್ಯೇಕ ಪ್ರೂಫ್‌ರೀಡಿಂಗ್ ಸೌಲಭ್ಯ ಒದಗಿಸುತ್ತೇವೆ.
ನೀವು ನಿಮ್ಮ ಬರವಣಿಗೆಯನ್ನು ಇಂಗ್ಲಿಷ್ ಬಾರದ ಜಗತ್ತಿನೆಲ್ಲೆಡೆ ಇರುವ ಕೋಟ್ಯಂತರ ಜನರಿಗೆ ಒದಗಿಸಲು ಬಯಸುತ್ತೀರಾ? ಹಾಗಿದ್ದರೆ ನಾವು ಇಂಗ್ಲಿಷನ್ನು ಕನ್ನಡ, ಪೋಲಿಷ್, ಫಿನ್ನಿಷ್ , ಮತ್ತು ಇತರ ಭಾಷೆಗಳಿಗೆ ಅನುವಾದ ಮಾಡಿಕೊಡುತ್ತೇವೆ. ನಮ್ಮ ಪರಿಣತಿಯ ಬಗ್ಗೆ…
- ಶೈಕ್ಷಣಿಕ ಅನುವಾದ: ನಿಯತಕಾಲಿಕೆಗಳಲ್ಲಿನ ನಿಮ್ಮ ಬರಹಗಳು, ಸಂಶೋಧನಾ ಲೇಖನಗಳು, ಪ್ರೌಢ ಪ್ರಬಂಧಗಳು, ಮತ್ತು ಪ್ರಂಬAಧಗಳನ್ನು ಇಂಗ್ಲಿಷ್‌ಗೆ ಅಥವಾ ಇಂಗ್ಲಿಷ್‌ನಿAದ ಕನ್ನಡಕ್ಕೆ ಅನುವಾದಿಸಲು ನಮ್ಮ ತಂಡವಿದೆ. ಇದರಿಂದ ನಿಮ್ಮ ಪ್ರಕಟಣೆಗಳ ವಿಸ್ತಾರ ಹೆಚ್ಚುತ್ತದೆ ಮತ್ತು ನಿಮ್ಮ ಕೆಲಸದ ಪರಿಣಾಮವೂ ವಿಸ್ತರಿಸುತ್ತದೆ.
- ಔದ್ಯಮಿಕ ಅನುವಾದ: ನೀವು ಉದ್ಯಮದಲ್ಲಿ ಪ್ರಗತಿ ಸಾಧಿಸಲು ಮತ್ತು ಹೆಚ್ಚು ಸಂಪಾದಿಸಲು ನಿಮ್ಮ ಕಂಪೆನಿಯ ವೆಬ್‌ಸೈಟನ್ನು, ಬ್ಗಾಗ್ ಪೋಸ್ಟರ್ಗಳನ್ನು, ಮಾರ್ಕೆಟಿಂಗ್ ತಂತ್ರಗಳು, ಮತ್ತು ಉದ್ಯಮಕ್ಕೆ ಸಂಬAಧಿಸಿದ ಇತರ ವಿಷಯಗಳನ್ನು ಅನುವಾದಿಸುವುದು ನಿರ್ಣಾಯಕ ಪಾತ್ರ ವಹಿಸುತ್ತದೆ.
- ಸಾಹಿತ್ಯಿಕ ಅನುವಾದ: ನೀವು ನಿಮ್ಮ ಹಸ್ತಪ್ರತಿಯ ಮೇಲೆ ಸಾಕಷ್ಟು ಶ್ರಮ ಹಾಕಿರುತ್ತೀರಿ. ಅದು ಕಾದಂಬರಿಯಾಗಿರಬಹುದು, ಆತ್ಮಚರಿತ್ರೆಯಾಗಿರಬಹುದು ಅಥವಾ ಚಿತ್ರಕಥೆಯಾಗಿರಬಹುದು. ವೃತ್ತಿಪರ ಮಾನವ ಭಾಷಾಂತರ ಸೇವೆಗಳು ನಿಮ್ಮ ಬರಹದ ಓದುಗರ ಸಂಖ್ಯೆಯನ್ನು ನಾಟಕೀಯವಾಗಿ ಹೆಚ್ಚಿಸುತ್ತವೆ ಮತ್ತು ನಿಮ್ಮ ಬರಹವನ್ನು ಆಸ್ವಾದಿಸಲು ಜಾಗತಿಕ ಓದುಗರಿಗೆ ಸಾಧ್ಯವಾಗುತ್ತದೆ.
ProofreadingServices.com ನಲ್ಲಿ ನಮ್ಮ ಭಾಷಾ ತಜ್ಞರ ತಂಡ ಸಾವಿರಾರು ದಾಖಲೆಗಳನ್ನು ಅನುವಾದಿಸುವ ಮೂಲಕ ಬೆಂಗಳೂರು, ಹುಬ್ಬಳ್ಳಿ- ಧಾರವಾಡ, ಮತ್ತು ಮೈಸೂರು ಮತ್ತು ವಿಶ್ವದೆಲ್ಲೆಡೆ ಸಂತೃಪ್ರ ಗ್ರಾಹಕರನ್ನು ಹೊಂದಿದೆ.ಇತರ ಭಾಷಾಂತರ ಕಂಪೆನಿಗಳಿಗಿAತ ಭಿನ್ನವಾಗಿ, ಕನ್ನಡದಿಂದ ಇಂಗ್ಲಿಷ್ ಭಾಷಾಂತರದೊAದಿಗೆ ಇಂಗ್ಲಿಷ್ ಪ್ರೂಫ್‌ರೀಡಿಂಗ್ ಸೇವೆಯನ್ನು ಒದಗಿಸುವ ಮೂಲಕ ಅನುವಾದಗೊಂಡ ದಾಖಲೆಗಳನ್ನು ಮೂಲ ಭಾಷಿಗನೇ ಬರೆದಂತೆ ಕಾಣುವಷ್ಟು ನೈಜತೆ ತರುತ್ತೇವೆ.
ನಾವು ಯಾರು?
ProofreadingServices.com ನಲ್ಲಿ ನಮ್ಮ ಭಾಷಾಂತರಕಾರರು ನಿಮ್ಮ ಬರಹವನ್ನು, ನಿಮ್ಮ ಧ್ವನಿ ಮತ್ತು ಶೈಲಿಗೆ ಭಂಗ ಬರದಂತೆ ನಿಖರವಾಗಿ ಅನುವಾದಿಸುವ ಜ್ಞಾನ ಮತ್ತು ಅನುಭವ ಹೊಂದಿದ್ದಾರೆ. ನಮ್ಮ ಕನ್ನಡ ಅನುವಾದಕರು ನರವಿಜ್ಞಾನದಿಂದ ಖಗೋಳವಿಜ್ಞಾನದವರೆಗೆ ವಿಭಿನ್ನ ವಿಷಯಗಳಲ್ಲಿ ಪರಿಣತಿ ಸಾಧಿಸಿರುವುದರಿಂದ ನಿಮ್ಮ ಯೋಜನೆಯನ್ನು ನಿಮ್ಮ ಆ ನಿರ್ದಿಷ್ಟ ಕ್ಷೇತ್ರದ ಬಗ್ಗೆ ತಿಳಿದ ತಂಡದ ಸದಸ್ಯನಿಗೆ ನೀಡಲಾಗುತ್ತದೆ. ಹಾಗಾಗಿ, ನಿಮಗೆ ಒಂದು ಶಿಫಾರಸು ಪತ್ರ ಬೇಕಿದ್ದರೂ, ಕಲ್ಪನೆಯ ವಸ್ತುವಾಗಿದ್ದರೂ, ಅಥವಾ ಸಾಹಿತ್ಯ ವಿಮರ್ಶೆಯಾಗಿದ್ದರೂ ನಾವು ಇಂಗ್ಲಿಷ್‌ಗೆ ಅಥವಾ ಇಂಗ್ಲಿಷ್‌ನಿAದ ಭಾಷಾಂತರಿಸಿ ಕೊಡುತ್ತೇವೆ. ನಿಮ್ಮ ಯೋಜನೆಯ ಅತ್ಯುತ್ತಮ ಗುಣಮಟ್ಟದ ಅನುವಾದವನ್ನು ಹೊರತರುವ ಬಗ್ಗೆ ನೀವು ನಮ್ಮ ಕನ್ನಡ ಅನುವಾದಕರ ತಂಡವನ್ನು ನಂಬಬಹುದು.
ನಮ್ಮ ಕನ್ನಡ ಭಾಷಾಂತರ ಸೇವೆಯನ್ನೇ ಏಕೆ ಆಯ್ದುಕೊಳ್ಳಬೇಕು?
ProofreadingServices.com ನಲ್ಲಿ ನಾವು ವಿಶ್ವದೆಲ್ಲೆಡೆಯ ಬರಹಗಾರರಿಗೆ ಅತ್ಯುತ್ತಮ ಅನುವಾದಕರು ಮತ್ತು ಇಂಗ್ಲಿಷ್ ಪ್ರೂಫ್‌ರೀಡರ್‌ಗಳ ಜೊತೆ ಸಂಪರ್ಕ ಸಾಧಿಸುವುದನ್ನು ಸುಲಭವಾಗಿಸುತ್ತೇವೆ. ಉದ್ಯಮ, ಶೈಕ್ಷಣಿಕ, ಮತ್ತು ಇತರ ಬರಹಗಾರರಿಗೆ ನಾವು ಒದಗಿಸುವ ಕೈಗೆಟುಕುವ ದರದ, ನಿಖರ ಭಾಷಾಂತರ ಸೇವೆಗಳು ನಿಮ್ಮನ್ನು ಹೊಸ ಓದುಗರಿಗೆ ಪರಿಚಯಿಸುತ್ತವೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ವಿಸ್ತರಿಸಲು ಸಹಕಾರಿಯಾಗುತ್ತವೆ, ಅದು ಯಾವುದೇ ವಿಷಯ ಅಥವಾ ಭಾಷೆಯಿರಲಿ. ನಾವು ನಮ್ಮ ವೃತ್ತಿಪರ ಅನುವಾದಕರು ಸಾಧಿಸಿರುವ ಅತ್ಯುಚ್ಛ ಗುಣಮಟ್ಟಕ್ಕಾಗಿ ಹೆಮ್ಮೆಪಡುತ್ತೇವೆ, ಮತ್ತು ನಮ್ಮ ಕೆಲಸದಿಂದ ನೀವು ಸಂತೃಪ್ತರಾಗುವುದನ್ನು ಖಾತ್ರಿಪಡಿಸುತ್ತೇವೆ.